 ಮೂಲದೊಡನೆ ಪರಿಶೀಲಿಸಿ

ಉನ್ಸೆಟ್, ಸೀಗ್ಫ್ರೀಡ್: ೧೮೮೭-೧೯೪೯. ನಾರ್ವೆಯ ಕಾದಂಬರಿಕಾರ್ತಿ. ಹೊರಗಿನ ಜಗತ್ತಿನ ಗಮನವನ್ನು ಸೆಳೆದಿರುವ ೨೦ನೆಯ ಶತಮಾನದ ಇಬ್ಬರು ಮೂವರು ನಾರ್ವೀಜಿಯನ್ ಸಾಹಿತಿಗಳಲ್ಲಿ ಒಬ್ಬಳು. ೧೯೨೮ರಲ್ಲಿ ನೋಬೆಲ್ ಪಾರಿತೋಷಕ ಪಡೆದಳು. ಮೊದಲ ಕೃತಿಗಳು ಆಸ್ಲೋ ನಗರದ ಮಧ್ಯಮ ವರ್ಗದ ಹೆಂಗಸರ ಬಾಳಿನ ನೈಜ ಚಿತ್ರಗಳು. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಜೆನ್ನಿ (೧೯೧೧). ೧೯೨೦-೨೨ರ ಅವಧಿಯಲ್ಲಿ ಈಕೆಯ ಪ್ರಖ್ಯಾತ ಚಾರಿತ್ರಿಕ ಕಾದಂಬರಿಗಳು ಬರತೊಡಗಿದುವು. ಮಧ್ಯಯುಗದ ಸ್ಕಾ ್ಯಂಡಿನೇವಿಯ ದೇಶಗಳ ಜನಜೀವನದ ಚಿತ್ರಗಳಿಗೆ ಅವು ಹೆಸರಾದಂತಿವೆ. ಪ್ರಾಧ್ಯಾಪಕನೊಬ್ಬನ ಮಗಳಾಗಿದ್ದ ಉನ್ಸೆಟ್ ತಂದೆಗೆ ಅವನ ಸಂಶೋಧನ ಕಾರ್ಯದಲ್ಲಿ ಸಹಾಯ ಮಾಡುವಾಗ ಅವನ ವ್ಯಾಸಂಗವಿಷಯ ವಾದ ಮಧ್ಯಯುಗದ ವಿವರಗಳಲ್ಲಿ ತಾನೂ ಆಸಕ್ತಳಾದಳು. ಈ ಕ್ಷೇತ್ರದಲ್ಲಿ ಇವಳ ಅತ್ಯಂತ ಪ್ರಸಿದ್ಧವಾದ ಕಾದಂಬರಿಗಳು ಕ್ರಿಸ್ಚಿನ್ ಲ್ಯಾವ್ರೆನ್ಸ್‌ ಡ್ಯಾಟರ್ (೧೯೨೫) ಒಲಾವ್ ಅಡೆನ್ಸನ್ ಇಹೆಸ್ಟಿವಿಕೆನ್ (ಹೆಸ್ಟಿವಿಕೆನ್ನನ ಒಡೆಯ. ೧೯೨೭). ಮತ್ತು ಒಲಾವ್ ಅಡೆನ್ಸನ್ ಓಗ್ ಹ್ಯಾನ್ಸ್‌ ಬಾರ್ನ್‌ (ಒಲಾವ್ ಅಡೆನ್ಸನ್ ಮತ್ತು ಅವನ ಮಕ್ಕಳು ೧೯೨೭). ಇವೆಲ್ಲ ೧೪ನೆಯ ಶತಮಾನದ ನಾರ್ವೆಗೆ ಸಂಬಂಧಪಟ್ಟವು. ಇವುಗಳಲ್ಲಿ ಕಂಡುಬರುವ ಚಾರಿತ್ರಿಕ ವಿವರಗಳು, ವಾತಾವರಣ ಕಲ್ಪನೆ ಮೊದಲಾದುವು ಇವಳ ಪಾಂಡಿತ್ಯಕ್ಕೆ ಸಾಕ್ಷಿಗಳಾಗಿವೆ. ಪಾತ್ರಗಳ ಧಾರ್ಮಿಕ ಮತ್ತು ಲೈಂಗಿಕ ಸಮಸ್ಯೆಗಳನ್ನು ಈಕೆ ವಿಶ್ಲೇಷಣೆ ಮಾಡಿ ತೋರಿಸಿರುವ ರೀತಿಯೂ ಅದ್ಭುತವಾಗಿದೆ. ಇವುಗಳ ಅನಂತರ ಬರೆದ ಕೊಡಲಿ (೧೯೨೮). ಖಿhe Soಟಿ ಂveಟಿgeಡಿ ಸೇಡುಗಾರ ಮಗ (೧೯೩೦), ಖಿhe ಃuಡಿಟಿiಟಿg ಃush ಉರಿಯುವ ಪೊದೆ (೧೯೩೦), ಮೊದಲಾದ ಕಾದಂಬರಿಗಳಲ್ಲಿ ಉನ್ಸೆಟ್ ಮತ್ತೆ ಸಮಕಾಲೀನ ಸಮಾಜಕ್ಕೆ ಹಿಂದಿರುಗುತ್ತಾಳೆ. ಈ ಮಧ್ಯೆ ೧೯೩೪ರಲ್ಲಿ ಇವಳು ರೋಮನ್ ಕ್ಯಾಥೊಲಿಕ್ ಪಂಥಕ್ಕೆ ಪರಿವರ್ತನೆ ಹೊಂದಿದ್ದಳು. ಇವಳ ಈ ಹೊಸಮತದ ಪ್ರಭಾವನ್ನು ಈ ಕಾದಂಬರಿಗಳಲ್ಲೂ ನಾರ್ಸ್‌ಕೆ ಹೆಲ್ಗ್‌ನರ್ (೧೯೩೪) ಎಂಬ ಸಂತರ ಚರಿತ್ರೆಯಲ್ಲೂ ಕಾಣಬಹುದು. ಇಡೆ ಎಲಿಝಬೆತ್ (೧೯೩೨) ಮತ್ತೆ ಡಾನ್ ಟ್ರೊಫಾಸ್ಟೆಹುಸ್ಟ್ರ (ಪತಿವ್ರತೆ. ೧೯೩೬) ಇವಳ ಇನ್ನೆರಡು ಕಾದಂಬರಿಗಳು. ಇಲ್ಲೆವ್ ಆರ್ (ಹನ್ನೊಂದು ವರ್ಷಗಳು. ೧೯೩೪) ಬಹುಮಟ್ಟಿಗೆ ಆತ್ಮ ಚರಿತ್ರಾತ್ಮಕವಾದ ಕೃತಿ. ಇದರಲ್ಲೂ ತಾನು ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಬರೆದ ಹ್ಯಾಪಿ ಟೈಮ್ಸ್‌ ಇನ್ ನಾರ್ವೆ (೧೯೪೨) ಎಂಬ ಗ್ರಂಥದಲ್ಲೂ ಉನ್ಸೆಟ್ ಮಕ್ಕಳ ಮನಸ್ಸನ್ನು ಅರಿತುಕೊಳ್ಳುವುದರಲ್ಲಿ ತನಗಿದ್ದ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾಳೆ. 
ಉನ್ಸೆಟ್ಟಳ ವೈಯಕ್ತಿಕ ಜೀವನವೂ ಮಧ್ಯಯುಗದ ವಿಷಯದಲ್ಲಿ ಅವಳಿಗಿದ್ದ ಆದರವನ್ನು ತೋರಿಸುತ್ತಿತ್ತು. ಪ್ರ. ಶ. ೧,೦೦೦ದಲ್ಲಿ ಕಟ್ಟಿದ್ದ ಹಳೆಯ ಮನೆಯೊಂದನ್ನು ಸರಿಪಡಿಸಿ ಅದರಲ್ಲೇ ವಾಸಿಸುತ್ತಿದ್ದುದಲ್ಲದೆ. ನಾರ್ವೆಯಲ್ಲಿ ೧೮೯೯-೧೯೦೯ರವರೆಗೆ ಕಾರ್ಯದರ್ಶಿ.				(ಎಂ.ಆರ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ